ಏನ್ ಮಾಯೆ ಇದು? · Yen Maaye Idu

ಬಫರಿಂಗ್

Buffering


A young woman in pyjamas hugs him at her door, her phone in her other hand, as he holds a birthday cake

Every Sunday at 9 pm for eleven months, Nikhil in Bengaluru and Sneha in Delhi watched a movie "together". Same film, same second, both pressing play on a countdown. Her internet always lagged. His jokes always arrived four seconds late. Half their relationship was "Hello? You froze."

ಹನ್ನೊಂದು ತಿಂಗಳು, ಪ್ರತಿ ಭಾನುವಾರ ರಾತ್ರಿ ಒಂಬತ್ತಕ್ಕೆ, ಬೆಂಗಳೂರಲ್ಲಿರೋ ನಿಖಿಲ್, ದೆಹಲೀಲಿರೋ ಸ್ನೇಹಾ "ಒಟ್ಟಿಗೆ" ಸಿನಿಮಾ ನೋಡ್ತಿದ್ರು. ಅದೇ ಸಿನಿಮಾ, ಅದೇ ಸೆಕೆಂಡು, ಕೌಂಟ್‌ಡೌನ್ ಹೇಳಿ ಇಬ್ರೂ ಪ್ಲೇ ಒತ್ತೋರು. ಅವಳ ಇಂಟರ್ನೆಟ್ ಯಾವಾಗ್ಲೂ ಲ್ಯಾಗ್. ಅವನ ಜೋಕ್ಸ್ ಯಾವಾಗ್ಲೂ ನಾಲ್ಕು ಸೆಕೆಂಡ್ ಲೇಟಾಗಿ ತಲುಪ್ತಿದ್ವು. ಅವರ ಅರ್ಧ ಲವ್ ಸ್ಟೋರಿ ಅಂದ್ರೆ "ಹಲೋ? ಫ್ರೀಜ್ ಆದೆ ನೀನು."

The frozen frame

On her birthday he called at 11:58 pm. The video stuck, as usual, on a blurry, pixelated version of his face. "You've frozen again," she said, laughing. "Typical."

Then her doorbell rang.

She opened the door still holding the phone, his frozen face on the screen, and there he was, the real one, in the corridor of her PG with a slightly squashed cake and a very proud grin. He had taken the evening flight and spent an hour finding the right building.

ಫ್ರೀಜ್ ಆದ ಫ್ರೇಮ್

ಅವಳ ಬರ್ತ್‌ಡೇ ದಿನ ರಾತ್ರಿ 11:58ಕ್ಕೆ ಅವನು ಕಾಲ್ ಮಾಡಿದ. ಎಂದಿನಂತೆ ವಿಡಿಯೋ ಸ್ಟಕ್ ಆಯ್ತು, ಅವನ ಮುಖ ಮಸುಕು ಮಸುಕಾಗಿ. "ಮತ್ತೆ ಫ್ರೀಜ್ ಆದೆ," ಅಂತ ನಕ್ಕಳು. "ಯಾವಾಗ್ಲೂ ಇದೇ."

ಅಷ್ಟರಲ್ಲಿ ಡೋರ್‌ಬೆಲ್ ಆಯ್ತು.

ಫೋನ್ ಕೈಯಲ್ಲೇ ಹಿಡ್ಕೊಂಡು, ಸ್ಕ್ರೀನ್ ಮೇಲೆ ಅವನ ಫ್ರೀಜ್ ಆದ ಮುಖ ಇಟ್ಕೊಂಡು ಬಾಗಿಲು ತೆಗೆದ್ಲು. ಅಲ್ಲಿ ನಿಜವಾದ ನಿಖಿಲ್, ಅವಳ ಪಿಜಿ ಕಾರಿಡಾರ್‌ನಲ್ಲಿ, ಸ್ವಲ್ಪ ಚಪ್ಪಟೆ ಆದ ಕೇಕ್ ಹಿಡ್ಕೊಂಡು, ತುಂಬಾ ಹೆಮ್ಮೆಯ ನಗು. ಸಂಜೆ ಫ್ಲೈಟ್ ಹಿಡಿದು, ಸರಿಯಾದ ಬಿಲ್ಡಿಂಗ್ ಹುಡುಕೋಕೆ ಒಂದು ಗಂಟೆ ಅಲೆದಾಡಿದ್ದ.

No lag

She didn't say anything. She just held him, cake and all, for what her roommates later swore was a full minute. No delay, no buffering, no "can you hear me?". For the first time in eleven months, everything arrived exactly on time.

Yen Maaye Idu is for that magic: the hug that makes all the distance worth it.

ಲ್ಯಾಗ್ ಇಲ್ಲ

ಅವಳು ಏನೂ ಮಾತಾಡ್ಲಿಲ್ಲ. ಕೇಕ್ ಸಮೇತ ಅವನನ್ನ ತಬ್ಕೊಂಡ್ಲು; ಪೂರ್ತಿ ಒಂದು ನಿಮಿಷ ಅಂತ ಅವಳ ರೂಮ್‌ಮೇಟ್ಸ್ ಆಮೇಲೆ ಆಣೆ ಮಾಡಿ ಹೇಳಿದ್ರು. ಡಿಲೇ ಇಲ್ಲ, ಬಫರಿಂಗ್ ಇಲ್ಲ, "ಕೇಳಿಸ್ತಿದೆಯಾ?" ಇಲ್ಲ. ಹನ್ನೊಂದು ತಿಂಗಳಲ್ಲಿ ಮೊದಲ ಸಲ, ಎಲ್ಲಾ ಸರಿಯಾದ ಟೈಮ್‌ಗೇ ತಲುಪ್ತು.

ಏನ್ ಮಾಯೆ ಇದು ಆ ಮಾಯೆಗೆ: ಇಷ್ಟು ದೂರ ಎಲ್ಲಾ ಸಾರ್ಥಕ ಅನ್ಸೋ ಆ ಒಂದು ತಬ್ಬುಗೆಗೆ.

Yen Maaye Idu

The perfume in this kathe

ಏನ್ ಮಾಯೆ ಇದು?

Yen Maaye Idu · FRUITY · GOURMAND · FLORAL

₹1,299 ₹1,499

ಏನ್ ಮಾಯೆ ಇದು? ಪ್ರೀ-ಆರ್ಡರ್ ಮಾಡಿ · Pre-order

← ಎಲ್ಲಾ ಕಥೆಗಳು · All stories  ·  Share your kathe