Namma hudga asked her. Then he asked again. And again. Every time, namma hudgi said no.
He didn't stop hoping, but at some point, both of them needed space. So came a break: two, maybe three months of not meeting, not talking. And it was namma hudga who couldn't sleep. Every song, every street, every evening reminded him of her.
ನಮ್ ಹುಡ್ಗ ಅವ್ಳಿಗೆ ಕೇಳಿದ. ಮತ್ತೆ ಕೇಳಿದ. ಮತ್ತೆ ಮತ್ತೆ ಕೇಳಿದ. ಪ್ರತಿ ಸಲ ನಮ್ ಹುಡ್ಗಿ "ಇಲ್ಲ" ಅಂದ್ಲು.
ಅವನು ಆಸೆ ಬಿಡ್ಲಿಲ್ಲ. ಆದ್ರೆ ಒಂದು ಹಂತದಲ್ಲಿ ಇಬ್ರಿಗೂ ಸ್ವಲ್ಪ ದೂರ ಬೇಕಾಗಿತ್ತು. ಹಾಗೇ ಒಂದು ಬ್ರೇಕ್: ಎರಡು, ಮೂರು ತಿಂಗಳು ಭೇಟಿನೂ ಇಲ್ಲ, ಮಾತೂ ಇಲ್ಲ. ನಿದ್ದೆ ಬರದೆ ಒದ್ದಾಡಿದ್ದು ನಮ್ ಹುಡ್ಗನೇ. ಪ್ರತಿ ಹಾಡು, ಪ್ರತಿ ರಸ್ತೆ, ಪ್ರತಿ ಸಂಜೆ ಅವ್ಳನ್ನೇ ನೆನಪಿಸ್ತಿತ್ತು.
The day she asked
When the break ended, he went back to meet her. He had prepared nothing. He expected nothing.
And this time, she asked him.
Then she hugged him for the first time. It was gentle, like a cool breeze on a warm day. The street went quiet. The world went quiet. Time simply stood still.
All he could think was: yen maaye idu? What magic is this?
ಅವ್ಳೇ ಕೇಳಿದ ದಿನ
ಬ್ರೇಕ್ ಮುಗಿದ ಮೇಲೆ ಅವ್ಳನ್ನ ಭೇಟಿ ಆಗೋಕೆ ಹೋದ. ಏನೂ ತಯಾರಿ ಮಾಡ್ಕೊಂಡಿರ್ಲಿಲ್ಲ. ಏನೂ ನಿರೀಕ್ಷೆ ಇಟ್ಕೊಂಡಿರ್ಲಿಲ್ಲ.
ಈ ಸಲ ಅವ್ಳೇ ಕೇಳಿದ್ಲು.
ಆಮೇಲೆ ಮೊದಲ ಸಲ ಅವನನ್ನ ತಬ್ಕೊಂಡ್ಲು. ಬಿಸಿಲಿನ ದಿನದಲ್ಲಿ ಬೀಸೋ ತಂಗಾಳಿ ತರ ಮೃದುವಾಗಿ. ಬೀದಿ ಮೌನ ಆಯ್ತು. ಜಗತ್ತೇ ಮೌನ ಆಯ್ತು. ಕಾಲವೇ ನಿಂತ್ಹೋಯ್ತು.
ಅವನ ತಲೇಲಿ ಒಂದೇ ಪ್ರಶ್ನೆ: ಏನ್ ಮಾಯೆ ಇದು?
The perfume
Yen Maaye Idu opens with pear, bergamot and a spark of pepper, the nervous excitement of that walk back to her. At its heart are orange blossom, neroli and jasmine, as soft as that first hug. It settles into vanilla, amber, musk and benzoin, a warm glow that lingers like a little magic.
ಪರ್ಫ್ಯೂಮ್
ಏನ್ ಮಾಯೆ ಇದು ಶುರು ಆಗೋದು ಪೇರ್, ಬರ್ಗಮಾಟ್ ಮತ್ತೆ ಸ್ವಲ್ಪ ಮೆಣಸಿನ ಚುರುಕಿಂದ, ಅವ್ಳ ಹತ್ರ ವಾಪಸ್ ನಡ್ಕೊಂಡು ಹೋಗುವಾಗಿನ ಆ ಗಾಬರಿ ಖುಷಿ ತರ. ಮಧ್ಯದಲ್ಲಿ ಕಿತ್ತಳೆ ಹೂವು, ನೆರೋಲಿ, ಮಲ್ಲಿಗೆ, ಆ ಮೊದಲ ಅಪ್ಪುಗೆಯಷ್ಟೇ ಮೃದು. ಕೊನೆಗೆ ವೆನಿಲ್ಲಾ, ಅಂಬರ್, ಮಸ್ಕ್, ಬೆಂಜೊಯಿನ್, ಸ್ವಲ್ಪ ಮಾಯೆ ತರ ಉಳ್ಕೊಳ್ಳೋ ಬೆಚ್ಚನೆ ಹೊಳಪು.
Your magic
You've had that moment too: one touch, and the world goes quiet. Wear it for the one you'd cross seven lifetimes for.
ಆ ಕ್ಷಣ ನಿಮ್ ಲೈಫಲ್ಲೂ ಬಂದಿರುತ್ತೆ: ಒಂದು ಸ್ಪರ್ಶ, ಜಗತ್ತೇ ಮೌನ. ಏನ್ ಮಾಯೆ ಇದು.
ನಿಮ್ ಮಾಯೆ
ಆ ಕ್ಷಣ ನಿಮ್ ಲೈಫಲ್ಲೂ ಬಂದಿರುತ್ತೆ: ಒಂದು ಸ್ಪರ್ಶ, ಜಗತ್ತೇ ಮೌನ. ಏಳೇಳು ಜನ್ಮ ದಾಟಿ ಬರೋಕೂ ರೆಡಿ ಇರೋ ಆ ವ್ಯಕ್ತಿಗೋಸ್ಕರ ಇದನ್ನ ಹಾಕ್ಕೊಳ್ಳಿ.

The perfume in this kathe
ಏನ್ ಮಾಯೆ ಇದು?
Yen Maaye Idu · FRUITY · GOURMAND · FLORAL
₹1,299 ₹1,499
ಏನ್ ಮಾಯೆ ಇದು? · More kathe



