ಈ ಸಂಜೆ · Ee Sanje

ರೈಡ್ ಮುಗೀಲೇಬಾರ್ದು

The ride that shouldn't end


A hostel gate at dusk

Every day, namma hudga watched the clock more than his work. Not for the weekend, not for a holiday. Just for the sun to go down.

Because when office ended, the best part of the day began. He'd ride across town, pick up his hudgi, and take her back to her hostel. Her arms around him, the city turning orange, then indigo. He'd take the long way. He'd slow down at every signal. Inside, one thought on repeat: ee ride mugeeleebaardu, this ride should never end.

It always did, at the hostel gate. But the evening didn't. Later that night they'd talk for hours, about nothing and everything, and time disappeared the way it only does when you're young and in love.

ನಮ್ ಹುಡ್ಗ ದಿನಾ ಕೆಲಸಕ್ಕಿಂತ ಜಾಸ್ತಿ ಗಡಿಯಾರಾನೇ ನೋಡ್ತಿದ್ದ. ವೀಕೆಂಡ್‌ಗೋಸ್ಕರ ಅಲ್ಲ, ರಜೆಗೋಸ್ಕರಾನೂ ಅಲ್ಲ. ಸೂರ್ಯ ಮುಳುಗೋಕೆ ಅಷ್ಟೇ.

ಯಾಕಂದ್ರೆ ಆಫೀಸ್ ಮುಗಿದ ಮೇಲೇನೇ ದಿನದ ಬೆಸ್ಟ್ ಟೈಮ್ ಶುರು ಆಗ್ತಿತ್ತು. ಊರಿನ ಆ ಕಡೆಯಿಂದ ಬೈಕ್‌ನಲ್ಲಿ ಬಂದು, ಅವನ ಹುಡ್ಗೀನ ಪಿಕ್ ಮಾಡ್ಕೊಂಡು, ಹಾಸ್ಟೆಲ್‌ಗೆ ಬಿಡ್ತಿದ್ದ. ಹಿಂದೆ ಅವ್ಳು ಅವನನ್ನ ತಬ್ಕೊಂಡು ಕೂತಿರ್ತಿದ್ಲು, ಊರೆಲ್ಲಾ ಕಿತ್ತಳೆ ಬಣ್ಣ, ಆಮೇಲೆ ನೀಲಿ. ಬೇಕಂತಾನೇ ಉದ್ದದ ದಾರಿ ಹಿಡೀತಿದ್ದ. ಪ್ರತಿ ಸಿಗ್ನಲ್‌ನಲ್ಲೂ ಸ್ಲೋ ಮಾಡ್ತಿದ್ದ. ಮನಸ್ಸಲ್ಲಿ ಒಂದೇ ಮಾತು: ಈ ರೈಡ್ ಮುಗೀಲೇಬಾರ್ದು.

ಆದ್ರೂ ಹಾಸ್ಟೆಲ್ ಗೇಟ್ ಹತ್ರ ರೈಡ್ ಮುಗೀತಿತ್ತು. ಸಂಜೆ ಮಾತ್ರ ಮುಗೀತಿರ್ಲಿಲ್ಲ. ರಾತ್ರಿ ಗಂಟೆಗಟ್ಲೆ ಮಾತು, ಏನೂ ಇಲ್ದೇನೂ, ಎಲ್ಲದರ ಬಗ್ಗೇನೂ. ಚಿಕ್ಕ ವಯಸ್ಸು, ಪ್ರೀತಿ, ಟೈಮ್ ಹೋಗಿದ್ದೇ ಗೊತ್ತಾಗ್ತಿರ್ಲಿಲ್ಲ.

Bottling an evening

Ee Sanje had to smell like that ride: bright and fresh at the start, like the first cool air after a hot day, with mandarin, lemon and an ozonic breeze. Then the warmth of nutmeg and green leaves as the light fades, and a soft base of musk, sandalwood and amber that stays long after you've reached the gate.

It's a fresh, easy perfume, made for the hour between work and the rest of your life.

ಒಂದು ಸಂಜೆಯನ್ನ ಬಾಟಲಲ್ಲಿ ತುಂಬಿದ್ದು

ಈ ಸಂಜೆ ಆ ರೈಡ್ ತರಾನೇ ಘಮಿಸ್ಬೇಕಿತ್ತು. ಶುರುವಲ್ಲಿ ತಾಜಾ, ಬಿಸಿಲಿನ ದಿನದ ನಂತರ ಬರೋ ಮೊದಲ ತಂಗಾಳಿ ತರ: ಕಿತ್ತಳೆ, ನಿಂಬೆ ಮತ್ತೆ ತಾಜಾ ಗಾಳಿ. ಬೆಳಕು ಇಳಿತಾ ಹೋದಂತೆ ಜಾಯಿಕಾಯಿ ಮತ್ತೆ ಹಸಿರೆಲೆಯ ಬೆಚ್ಚನೆ ಘಮ. ಕೊನೆಗೆ ಮಸ್ಕ್, ಶ್ರೀಗಂಧ, ಅಂಬರ್‌ನ ಮೃದು ಘಮ, ಗೇಟ್ ತಲುಪಿದ ಮೇಲೂ ಉಳ್ಕೊಳ್ಳೋದು.

ಸುಲಭವಾಗಿ ಹಾಕ್ಕೊಳ್ಳೋ ತಾಜಾ ಪರ್ಫ್ಯೂಮ್ ಇದು. ಕೆಲಸ ಮುಗಿದು ನಿಮ್ ಲೈಫ್ ಶುರು ಆಗೋ ಆ ಒಂದು ಗಂಟೆಗೋಸ್ಕರ.

Your evening

Everyone has an Ee Sanje. A ride, a walk, a call that went on past midnight. Wear it for yours, and if it brings one back, tell us your kathe.

Pre-order Ee Sanje →

ನಿಮ್ ಸಂಜೆ

ಎಲ್ರಿಗೂ ಒಂದು ಈ ಸಂಜೆ ಇರುತ್ತೆ. ಒಂದು ರೈಡ್, ಒಂದು ವಾಕ್, ಮಧ್ಯರಾತ್ರಿ ದಾಟಿದ ಒಂದು ಕಾಲ್. ನಿಮ್ ಸಂಜೆಗೋಸ್ಕರ ಇದನ್ನ ಹಾಕ್ಕೊಳ್ಳಿ. ಏನಾದ್ರೂ ನೆನಪಾದ್ರೆ, ನಿಮ್ ಕಥೆ ನಮಗೂ ಹೇಳಿ.

Ee Sanje

The perfume in this kathe

ಈ ಸಂಜೆ

Ee Sanje · FRESH · PARTY · AROMATIC

₹1,299 ₹1,499

ಈ ಸಂಜೆ ಪ್ರೀ-ಆರ್ಡರ್ ಮಾಡಿ · Pre-order

← ಎಲ್ಲಾ ಕಥೆಗಳು · All stories  ·  Share your kathe