At 5:59, Pallavi's laptop is still open. At 6:00 the last call ends. At 6:01 she shuts the lid, and her phone lights up right on cue. The group chat: "Downstairs. Don't you dare say 'five more minutes'."
Ritu and Sameer are waiting at the office gate, already arguing about the route. Tonight there's a free gig on Church Street: a young Kannada indie band nobody has heard of yet, which is exactly why they're going.
ಸಂಜೆ 5:59ಕ್ಕೆ ಪಲ್ಲವಿ ಲ್ಯಾಪ್ಟಾಪ್ ಇನ್ನೂ ಓಪನ್ ಆಗೇ ಇರುತ್ತೆ. 6:00ಕ್ಕೆ ಕೊನೆ ಕಾಲ್ ಮುಗೀತು. 6:01ಕ್ಕೆ ಲ್ಯಾಪ್ಟಾಪ್ ಮುಚ್ತಾಳೆ, ಅದೇ ಟೈಮ್ಗೆ ಫೋನ್ ಬೆಳಗುತ್ತೆ. ಗ್ರೂಪ್ ಚಾಟ್: "ಕೆಳಗೆ ಇದೀವಿ. 'ಇನ್ನೈದು ನಿಮಿಷ' ಅಂದ್ರೆ ನೋಡು ಮತ್ತೆ."
ರಿತು, ಸಮೀರ್ ಆಫೀಸ್ ಗೇಟ್ ಹತ್ರ ಕಾಯ್ತಿದಾರೆ, ಯಾವ ದಾರೀಲಿ ಹೋಗೋದು ಅಂತ ಆಗ್ಲೇ ಜಗಳ. ಇವತ್ತು ಚರ್ಚ್ ಸ್ಟ್ರೀಟ್ನಲ್ಲಿ ಫ್ರೀ ಗಿಗ್: ಇನ್ನೂ ಯಾರಿಗೂ ಗೊತ್ತಿಲ್ಲದ ಒಂದು ಹೊಸ ಕನ್ನಡ ಇಂಡೀ ಬ್ಯಾಂಡ್. ಅದಕ್ಕೇ ಹೋಗ್ತಿರೋದು.
The ride in
Purple line, packed coach, three people sharing one pair of earphones to "prepare" for the band. They get off at MG Road and walk the last stretch as the sky turns orange over the old buildings, stopping for nippattu masala and one lime soda split three ways.
ಹೋಗೋ ದಾರಿ
ಪರ್ಪಲ್ ಲೈನ್, ತುಂಬಿದ ಕೋಚ್, ಬ್ಯಾಂಡ್ಗೆ ಪ್ರಿಪೇರ್ ಆಗೋಕೆ ಮೂರು ಜನಕ್ಕೆ ಒಂದೇ ಜೊತೆ ಇಯರ್ಫೋನ್. ಎಂ.ಜಿ. ರೋಡ್ನಲ್ಲಿ ಇಳಿದು, ಹಳೇ ಬಿಲ್ಡಿಂಗ್ಗಳ ಮೇಲೆ ಆಕಾಶ ಕಿತ್ತಳೆ ಬಣ್ಣಕ್ಕೆ ತಿರುಗ್ತಿರುವಾಗ ನಡ್ಕೊಂಡು ಹೋಗ್ತಾರೆ. ಮಧ್ಯದಲ್ಲಿ ನಿಪ್ಪಟ್ಟು ಮಸಾಲ, ಮೂರು ಜನಕ್ಕೆ ಒಂದೇ ಲೈಮ್ ಸೋಡಾ.
The gig
A tiny stage, string lights, maybe forty people. The band is nervous for one song and brilliant after that. By the third song Sameer, who "doesn't dance", is dancing. By the fifth, a stranger is teaching Ritu the chorus. Pallavi films nothing. She's too busy being there.
ಗಿಗ್
ಸಣ್ಣ ಸ್ಟೇಜ್, ಸ್ಟ್ರಿಂಗ್ ಲೈಟ್ಸ್, ಹೆಚ್ಚೆಂದ್ರೆ ನಲವತ್ತು ಜನ. ಮೊದಲ ಹಾಡಲ್ಲಿ ಬ್ಯಾಂಡ್ ಸ್ವಲ್ಪ ನರ್ವಸ್, ಆಮೇಲೆ ಸಕ್ಕತ್. ಮೂರನೇ ಹಾಡಿಗೆ "ನಾನು ಡ್ಯಾನ್ಸ್ ಮಾಡಲ್ಲ" ಅನ್ನೋ ಸಮೀರ್ ಕುಣೀತಿದಾನೆ. ಐದನೇ ಹಾಡಿಗೆ ಯಾರೋ ಅಪರಿಚಿತರು ರಿತುಗೆ ಕೋರಸ್ ಕಲಿಸ್ತಿದಾರೆ. ಪಲ್ಲವಿ ಒಂದು ವಿಡಿಯೋನೂ ಮಾಡಲ್ಲ. ಅಲ್ಲಿರೋದ್ರಲ್ಲೇ ಬ್ಯುಸಿ.
The evening
At ten, walking back to the metro with sore feet and hoarse voices, Ritu says what they're all thinking: "Why don't we do this every week?" They've already decided they will.
That's Ee Sanje: fresh, a little party, a little aromatic, for the moment the workday ends and the evening with your people begins.
ಆ ಸಂಜೆ
ರಾತ್ರಿ ಹತ್ತಕ್ಕೆ, ನೋಯ್ತಿರೋ ಕಾಲು, ಕುಳಿತ ಗಂಟಲು, ಮೆಟ್ರೋಗೆ ವಾಪಸ್ ನಡೀತಿರುವಾಗ ರಿತು ಎಲ್ಲರ ಮನಸ್ಸಿನ ಮಾತು ಹೇಳ್ತಾಳೆ: "ಪ್ರತಿ ವಾರ ಯಾಕೆ ಹೀಗೆ ಮಾಡಬಾರದು?" ಆಗ್ಲೇ ಡಿಸೈಡ್ ಆಗಿದೆ, ಮಾಡ್ತಾರೆ.
ಇದೇ ಈ ಸಂಜೆ: ತಾಜಾ, ಸ್ವಲ್ಪ ಪಾರ್ಟಿ, ಸ್ವಲ್ಪ ಘಮ. ಕೆಲಸ ಮುಗಿದು, ನಿಮ್ಮವರ ಜೊತೆ ಸಂಜೆ ಶುರುವಾಗೋ ಆ ಕ್ಷಣಕ್ಕೆ.

The perfume in this kathe
ಈ ಸಂಜೆ
Ee Sanje · FRESH · PARTY · AROMATIC
₹1,299 ₹1,499
ಈ ಸಂಜೆ · More kathe



