ಹಾಗೇ ಸುಮ್ಮನೆ · Haage Summane

ಅರ್ಧ ಚಮಚ ಸಕ್ಕರೆ

Half a spoon of sugar


A young man hands a young woman in a hoodie a tumbler of filter coffee on a sunny Bengaluru balcony

Nothing happens in this story. That's the whole story.

It's a Sunday. Raghav wakes up first, as always, and makes two filter coffees in the steel davara-tumbler set his ajji gave them when they moved in. His: strong, two spoons of sugar. Hers: lighter, exactly half a spoon. He has never once asked. He just noticed, two years ago, on their third date.

ಈ ಕಥೇಲಿ ಏನೂ ಆಗಲ್ಲ. ಅದೇ ಇಡೀ ಕಥೆ.

ಭಾನುವಾರ. ಎಂದಿನಂತೆ ರಾಘವ್ ಮೊದಲು ಏಳ್ತಾನೆ, ಹೊಸ ಮನೆಗೆ ಬಂದಾಗ ಅಜ್ಜಿ ಕೊಟ್ಟ ಸ್ಟೀಲ್ ದವರ-ಲೋಟದಲ್ಲಿ ಎರಡು ಫಿಲ್ಟರ್ ಕಾಫಿ ಮಾಡ್ತಾನೆ. ಅವನದ್ದು ಸ್ಟ್ರಾಂಗ್, ಎರಡು ಚಮಚ ಸಕ್ಕರೆ. ಅವಳದ್ದು ಸ್ವಲ್ಪ ಲೈಟ್, ಸರಿಯಾಗಿ ಅರ್ಧ ಚಮಚ. ಅವನು ಒಂದು ಸಲಾನೂ ಕೇಳಿಲ್ಲ. ಎರಡು ವರ್ಷದ ಹಿಂದೆ, ಮೂರನೇ ಡೇಟ್‌ನಲ್ಲಿ, ಗಮನಿಸಿದ್ದ ಅಷ್ಟೇ.

The balcony

Ishita is on the balcony in his hoodie, the one she "borrowed" eight months ago, feet up on the cane chair, half-reading the newspaper. The neighbour's cat has decided it lives here now. The plants need watering. Nobody waters them.

He hands her the tumbler. She takes a sip, and the face she makes is the whole reason he gets up early.

ಬಾಲ್ಕನಿ

ಇಶಿತಾ ಬಾಲ್ಕನೀಲಿ, ಅವನ ಹೂಡೀಲಿ (ಎಂಟು ತಿಂಗಳ ಹಿಂದೆ "ಸಾಲ" ತಗೊಂಡಿದ್ದು), ಬೆತ್ತದ ಚೇರ್ ಮೇಲೆ ಕಾಲು ಚಾಚ್ಕೊಂಡು, ಅರ್ಧ ಪೇಪರ್ ಓದ್ತಾ ಕೂತಿದಾಳೆ. ಪಕ್ಕದ ಮನೆ ಬೆಕ್ಕು ಇದೇ ತನ್ನ ಮನೆ ಅಂತ ಡಿಸೈಡ್ ಮಾಡಿದೆ. ಗಿಡಗಳಿಗೆ ನೀರು ಹಾಕ್ಬೇಕು. ಯಾರೂ ಹಾಕಲ್ಲ.

ಅವನು ಲೋಟ ಕೊಡ್ತಾನೆ. ಅವಳು ಒಂದು ಗುಟುಕು ಕುಡೀತಾಳೆ; ಆಗ ಅವಳ ಮುಖದಲ್ಲಿ ಬರೋ ಆ ಎಕ್ಸ್‌ಪ್ರೆಶನ್‌ಗೋಸ್ಕರವೇ ಅವನು ಬೇಗ ಏಳೋದು.

The plan

"What's the plan today?" she asks.

"Nothing," he says.

"Perfect," she says.

They spend the day doing exactly that: a long breakfast, a nap, a walk to the bakery for Congress bun, an argument about which old Kannada song is the best. No photos, no reel, no milestone. Just two people who like each other, haage summane.

Haage Summane is for those days: soft, warm and unhurried, a love that needs no reason and no occasion.

ಪ್ಲಾನ್

"ಇವತ್ತು ಏನ್ ಪ್ಲಾನ್?" ಅಂತ ಕೇಳ್ತಾಳೆ.

"ಏನೂ ಇಲ್ಲ," ಅಂತಾನೆ.

"ಪರ್ಫೆಕ್ಟ್," ಅಂತಾಳೆ.

ಇಡೀ ದಿನ ಅದನ್ನೇ ಮಾಡ್ತಾರೆ: ನಿಧಾನದ ತಿಂಡಿ, ಒಂದು ನಿದ್ದೆ, ಕಾಂಗ್ರೆಸ್ ಬನ್‌ಗೆ ಬೇಕರಿವರೆಗೂ ವಾಕ್, ಯಾವ ಹಳೇ ಕನ್ನಡ ಹಾಡು ಬೆಸ್ಟ್ ಅಂತ ಒಂದು ಜಗಳ. ಫೋಟೋ ಇಲ್ಲ, ರೀಲ್ ಇಲ್ಲ, ಮೈಲ್‌ಸ್ಟೋನ್ ಇಲ್ಲ. ಒಬ್ಬರನ್ನೊಬ್ಬರು ಇಷ್ಟಪಡೋ ಇಬ್ರು, ಹಾಗೇ ಸುಮ್ಮನೆ.

ಹಾಗೇ ಸುಮ್ಮನೆ ಅಂಥಾ ದಿನಗಳಿಗೆ: ಮೆತ್ತನೆ, ಬೆಚ್ಚನೆ, ಅವಸರ ಇಲ್ಲದ; ಕಾರಣಾನೂ ಬೇಡ, ಸಂದರ್ಭಾನೂ ಬೇಡದ ಪ್ರೀತಿಗೆ.

Haage Summane

The perfume in this kathe

ಹಾಗೇ ಸುಮ್ಮನೆ

Haage Summane · SOFT VANILLA · OSMANTHUS

₹1,299 ₹1,499

ಹಾಗೇ ಸುಮ್ಮನೆ ಪ್ರೀ-ಆರ್ಡರ್ ಮಾಡಿ · Pre-order

← ಎಲ್ಲಾ ಕಥೆಗಳು · All stories  ·  Share your kathe