Two college friends across a canteen table, looking up from their phones into each other's eyes

For two years, Tanvi and Abhi had a whole relationship in memes. Not a romantic one. Strictly memes. He sent her engineering jokes at 1 am; she sent back Kannada movie dialogues with captions that made him laugh in lectures. Their chat was four thousand messages long and contained zero full sentences.

ಎರಡು ವರ್ಷ ತನ್ವಿ ಮತ್ತೆ ಅಭಿ ಮಧ್ಯೆ ಇದ್ದಿದ್ದು ಬರೀ ಮೀಮ್ಸ್. ರೊಮ್ಯಾನ್ಸ್ ಅಲ್ಲ. ಸ್ಟ್ರಿಕ್ಟ್ಲಿ ಮೀಮ್ಸ್. ಅವನು ರಾತ್ರಿ ಒಂದು ಗಂಟೆಗೆ ಎಂಜಿನಿಯರಿಂಗ್ ಜೋಕ್ಸ್ ಕಳಿಸ್ತಿದ್ದ; ಅವಳು ಕನ್ನಡ ಸಿನಿಮಾ ಡೈಲಾಗ್‌ಗಳಿಗೆ ಕ್ಯಾಪ್ಶನ್ ಹಾಕಿ ಕಳಿಸ್ತಿದ್ಲು, ಅವನು ಕ್ಲಾಸಲ್ಲೇ ನಗ್ತಿದ್ದ. ನಾಲ್ಕು ಸಾವಿರ ಮೆಸೇಜ್ ಇರೋ ಚಾಟ್, ಅದರಲ್ಲಿ ಒಂದೂ ಪೂರ್ತಿ ವಾಕ್ಯ ಇಲ್ಲ.

The canteen

In the last week of final year, they ended up at the same canteen table, cutting chai, both on their phones. He sent her a meme. It was about two friends who are obviously in love and are the last ones to know.

She saw it. He saw that she saw it. The little "seen" appeared under the message, and no reply came.

Instead, she put her phone down and looked up at him, straight across the table. Not a meme look. A real one. The canteen was loud, someone was shouting for more samosas, and neither of them heard a thing.

ಕ್ಯಾಂಟೀನ್

ಫೈನಲ್ ಇಯರ್‌ನ ಕೊನೆ ವಾರ, ಇಬ್ರೂ ಒಂದೇ ಕ್ಯಾಂಟೀನ್ ಟೇಬಲ್‌ನಲ್ಲಿ, ಕಟಿಂಗ್ ಚಾ, ಇಬ್ರ ಕೈಯಲ್ಲೂ ಫೋನ್. ಅವನು ಒಂದು ಮೀಮ್ ಕಳಿಸಿದ. ಇಬ್ರು ಫ್ರೆಂಡ್ಸ್, ಎಲ್ಲರಿಗೂ ಗೊತ್ತು ಅವರು ಲವ್‌ನಲ್ಲಿದಾರೆ ಅಂತ, ಅವರಿಗೇ ಕೊನೆಗೆ ಗೊತ್ತಾಗೋದು, ಅನ್ನೋ ಮೀಮ್.

ಅವಳು ನೋಡಿದ್ಲು. ಅವಳು ನೋಡಿದ್ದು ಅವನಿಗೆ ಗೊತ್ತಾಯ್ತು. ಮೆಸೇಜ್ ಕೆಳಗೆ "ಸೀನ್" ಬಂತು, ರಿಪ್ಲೈ ಬರ್ಲಿಲ್ಲ.

ಬದಲಿಗೆ ಅವಳು ಫೋನ್ ಕೆಳಗಿಟ್ಟು, ಟೇಬಲ್ ಆಕಡೆಯಿಂದ ನೇರವಾಗಿ ಅವನ ಕಣ್ಣಲ್ಲಿ ನೋಡಿದ್ಲು. ಮೀಮ್ ನೋಟ ಅಲ್ಲ. ನಿಜವಾದ ನೋಟ. ಕ್ಯಾಂಟೀನ್ ತುಂಬಾ ಗಲಾಟೆ, ಯಾರೋ ಇನ್ನೂ ಸಮೋಸಾ ಬೇಕು ಅಂತ ಕೂಗ್ತಿದ್ರು, ಇಬ್ರಿಗೂ ಏನೂ ಕೇಳಿಸ್ಲಿಲ್ಲ.

No caption needed

Abhi laughed first, the nervous kind. Tanvi said, "Took you two years, ಗೂಬೆ." He said, "You could've said something." She said, "I just did."

Their chat is still mostly memes. But now some of them come with sentences.

Kannalle Kathe is for that look: the one that says what four thousand messages couldn't.

ಕ್ಯಾಪ್ಶನ್ ಬೇಕಿಲ್ಲ

ಮೊದಲು ಅಭಿ ನಕ್ಕ, ನರ್ವಸ್ ನಗು. ತನ್ವಿ ಅಂದ್ಲು, "ಎರಡು ವರ್ಷ ಬೇಕಾಯ್ತಾ ನಿಂಗೆ, ಗೂಬೆ." ಅವನು ಅಂದ, "ನೀನೇ ಏನಾದ್ರೂ ಹೇಳಬಹುದಿತ್ತಲ್ಲ." ಅವಳು ಅಂದ್ಲು, "ಈಗ ಹೇಳಿದ್ನಲ್ಲ."

ಅವರ ಚಾಟ್‌ನಲ್ಲಿ ಈಗಲೂ ಜಾಸ್ತಿ ಮೀಮ್ಸೇ. ಆದ್ರೆ ಈಗ ಕೆಲವದರ ಜೊತೆ ವಾಕ್ಯಗಳೂ ಬರ್ತವೆ.

ಕಣ್ಣಲ್ಲೇ ಕಥೆ ಆ ನೋಟಕ್ಕೆ: ನಾಲ್ಕು ಸಾವಿರ ಮೆಸೇಜ್ ಹೇಳೋಕಾಗದ್ದನ್ನ ಹೇಳೋ ಒಂದು ನೋಟ.

Kannalle Kathe

The perfume in this kathe

ಕಣ್ಣಲ್ಲೇ ಕಥೆ

Kannalle Kathe · ROMANTIC · FLORAL · MUSK

₹1,299 ₹1,499

ಕಣ್ಣಲ್ಲೇ ಕಥೆ ಪ್ರೀ-ಆರ್ಡರ್ ಮಾಡಿ · Pre-order

← ಎಲ್ಲಾ ಕಥೆಗಳು · All stories  ·  Share your kathe